ಮನದ ಅರಸಿ

ಓ ಅರಸಿ, ಮನದಲೇನೋ ತವಕಾ,
ಆಗುವೆ ನಾನು ಕೆಲವೊಮ್ಮೆ ಭಾವುಕ ;
ಯಾರಿಗೆ ಹೇಳಲಿ, ಏನಂತ ಹೇಳಲಿ,
ಬದುಕನು ಬಳಸಿ - ಉಳಿಸಿ ಇತಿಹಾಸದ ಪುಟದಲಿ ;

ಒಮ್ಮೆ ಮುಗುಳ್ನಕ್ಕು , ಇನ್ನೊಮ್ಮೆ ಒಬ್ಬಂಟಿ ಅತ್ತು ,
ಒಮ್ಮೆ ಬಾನಲ್ಲಿ ಹಾರಾಡಿ , ಇನ್ನೊಮ್ಮೆ ಭುವಿಯಲ್ಲಿ ಬಚ್ಚಿಟ್ಟು ;
ಜೀವನದ ಪಯಣ ಸುಂದರ್ ವೆಂದಾಗ ,
ದುಃಖದ ಹೊಳೆ ಇಗೋ ನೋಡು ನನ್ನ , ಏಂದು ಮೂಗು ಮುರಿದಾಗ ;

ಹೊತ್ತು ಹೊರಟಿದ್ದೆ ...ಹಳೆಯ ನೆನಪುಗಳ ಸಂತೆ,
ಅರಿತರೂ ಅದಲ್ಲ ನನ್ನ ಜೀವನದ ಮೂಟೆ ಕಂತೆ ;
ಗೆಲ್ಲುವ ಛಲದಲ್ಲಿ ಮರಿತೆ ಆಡುವ ಆಟ ,
ಓ ಅರಸಿ - ಕಲಿಸುತಿರುವೆ ನೀ ದಿನಕ್ಕೊಂದು ಪಾಠ ,

ಅರಿತೆ ನಾನು ನನ್ನ ಮನವಾ ಅಂದುಕೊಂಡೆ,
ಮನದ ಅಡಿಯಲಿ ನನ್ನೇ ಕಳೆದುಕೊಂಡೆ,
ಓ ಅರಸಿ - ಅರಸುತ ನಿನ್ನ, ಲೋಕವೆಲ್ಲಾ ,
ಕೊನೆಗೂ ಕಂಡು ಕೊಂಡೆ ಪ್ರತಿ ಕ್ಷಣದಲ್ಲಿ -ಈ ಬದುಕೆಲ್ಲ ;

--ಮಯೂರ

Comments

  1. Hey Mahesh, snap is really too gud.it is showing the path widout destiny(final point) n we walk tat wid our loved ones. really a lifetime pic...matte kavana kannadalalli innu sundaravaagidhe :) keep going...

    ReplyDelete
  2. ಇದನ್ನ ಓದೋವಾಗ... ಎಲ್ಲಿಗೆ ಪಯಣ, ಯಾವುದೋ ದಾರಿ...ಹಾಡು ನೆನಪಾಯ್ತು ಮಹೇಶ್ ಅಲಿಯಾಸ್ ಮಯೂರ!
    ಕವನದ ಪದಗಳಲಿ ಮನದ ಮೂಲೆಯಲಿ ಅವಿತಿದ್ದ ದು:ಖ ಉಮ್ಮಳಿಸಿ ಬರ್ತಾಯಿದೆ ಅನ್ಸುತ್ತೆ!
    "ಗೆಲ್ಲುವ ಛಲದಲಿ ಮರೆತೆ ಆಡುವ ಆಟ,
    ಓ ಅರಸಿ- ಕಲಿಸುತಿರುವೆ ನೀ ದಿನಕ್ಕೊಂದು ಪಾಠ" ತುಂಬಾ ಚೆನ್ನಾಗಿದೆ...

    ಬ್ಲಾಗ್ ಪ್ರಪಂಚಕ್ಕೆ ಸ್ವಾಗತ
    ಮಯೂರ...
    ಬರಲಿ ನಿಮ್ಮಿಂದ ಕವನಗಳ
    ಮಹಾಪೂರ;
    ---ಅಮರ್ (ನಿರಾಳ)

    ReplyDelete

Post a Comment

Popular posts from this blog

ನಿಜ ಜೀವನದಲ್ಲಿ ಹಾಸ್ಯ : ಕಂಪನಿಯ ಹೆಸರಿನ ಗೊಂದಲ

ಜಾತಿ - ನಾ ಅರಿತಂತೆ - ಭಾಗ ೧

ಸ್ಪೂರ್ತಿಯ ಸೆಲೆ