Sunday, September 19, 2010

ಸ್ಪೂರ್ತಿಯ ಸೆಲೆ

ಮಧುರ ಕಂಠದ, ಸುಂದರ ನಯನಗಳ
ಚೆಲುವೆಯ ಕಂಡೆ ಮನದ ಅಂಗಳದಲ್ಲಿ ;
ನವಿಲು ನಡಿಗೆಯ, ದಿಟ್ಟ ಕೇಸರದ
ಬೆಡಗಿಯ ಕಂಡೆ ಹುಣ್ಣಿಮೆಯ ಬೆಳದಿಂಗಳಲ್ಲಿ ;

ಸರಳತೆಯಲ್ಲಿ ಅವಳ ಒಡೆತನ
ನಗುವಿನಲ್ಲಿ ಅವಳ ಸಿರಿತನ ;
ತಾಯಿ ಮಮತೆಯ ಛಾಯೆಯೋ
ತವರಿನ ಪಯಣದ ಸಂತಸವೋ
ಅರಿಯೆನು ನಾ ;

ಕಂಗಳಿಸಿದ ಸಮಯ ಪ್ರಜ್ಞೆಯ ಚೆಲುವೆಯ ಕಿವಿ ಓಲೆ
ಸಂತಸ ಹರಡುವ ಚೆಲುವೆ ಸ್ಪೂರ್ತಿಯ ಸೆಲೆ ;

- ಮಯೂರ

Saturday, February 20, 2010

ಜಾತಿ - ನಾ ಅರಿತಂತೆ - ಭಾಗ ೧

ಆಗ ನನಗೆ ವಯಸ್ಸು ೫. ದಿನ ನಿತ್ಯದಂತೆ ಎದ್ದು ಆಡಲಿಕ್ಕೆ ನಾನು ತಯಾರ್ ಆಗ್ತಾ ಇದ್ದೆ. ಅಷ್ಟ್ರಲ್ಲಿ - ಅವ್ವಾ ಬಾಬಾ ಗೆ ಹೇಳಿದ ಮಾತು ನನ್ನ ಕಿವಿಗೆ ಬಿತ್ತು - "ರೀ - ಇವತ್ತು ಸರ್ಕಾರಿ ಸಾಲ್ಯಾಗ, admissions ಶುರು ಆಗ್ಯಾವ. ಹೋಗಿ ಮಯ್ಯಾ ನ ಸೇರಸ ರೀ". ಅದು ನನ್ನ ಜೀವನದ ಶಾಲೆಯ ಮೊದಲ ದಿನ ವಾಗಿತ್ತು. ನಾನು ಅಂಗಿ ಚೊಣ್ಣ ತೊಟ್ಟು - ಎರಡು ದಿನ ಹಿಂದೆ ತಂದಿದ್ದ ಒಂದು ಪಾಟಿ ಚೀಲ, ಹೆಗಲಿಗೆ ಹಾಕಿ ಬಾಬಾನ್ ಕೈ ಹಿಡಿದು ಹೊರಟೆ. ಬಾಬಾ ಸರ್ಕಾರಿ ಆಫೀಸ್ ಅಲ್ಲಿ ಕೆಲಸ ಮಾಡುವ ವ್ಯಕ್ತಿ. ಯಾವದೋ ಪಕ್ಕದಲ್ಲಿ ಇರೋ ಹಳ್ಳಿಗೆ ಸೈಟ್ ಕೆಲಸದ ಮೇಲೆ ಹೋಗುವ ಗಡಿಬಿಡಿ. ಬೇಗ admission ಮಾಡಿ ಹೋಗೋಣ ಅಂತ ಬಂದ್ರು. ಅವರದು ಎತ್ತರವಾದ ಶರೀರ ; ನಡೆಯವುದು ವೇಗ; ನಾನು ನನ್ನ ಪುಟ್ಟ ಹೆಜ್ಜೆಗಳನ್ನೇ ದಾಪುಗಲಿನಂತೆ ಇಟ್ಟು ನಡೆದೆ; ಒಂದು ಕೈ ಬಾಬಾನ ಕೈ ಹಿಡಿದರೆ ಇನ್ನೊಂದು ನನ್ನ ಸೋರುತ್ತಿದ್ದ ಮೂಗು ಮತ್ತು ಜಾರುತ್ತಿದ್ದ ಚೊಣ್ಣ ಸರಿ ಮಾಡುವದರಲ್ಲಿ ತೊಡಗಿತ್ತು.

ನಾವು ವಾಸಿಸುವ ಮನೆಯಿಂದ ಕೆಲವೇ ಹೆಜ್ಜೆ ಆ ಶಾಲೆ. ನಾನು ಎಂದು ಅಲ್ಲಿ ಹೋಗಿರಲಿಲ್ಲ. ಬಾಬಾ ಮತ್ತು ನಾನು ಮೊದಲ ಹೆಜ್ಜೆ ಇಟ್ಟಿದ್ದು - ಸರಸ್ವತಿಯ ಮಡಿಲಾದ ಮುಪ್ಪಯ್ಯನ್ ಮಠ ದಲ್ಲಿ. ಮುಪ್ಪಯ್ಯನ್ ಮಠ - ಗೋಕಾಕ್ ನಗರದ ಕನ್ನಡ ಗಂಡು ಮಕ್ಕಳ ಶಾಲೆ - ನೋ ೨ ಕ್ಕೆ ಒಂದು ವಾಸ ಸ್ಥಳವಾಗಿತ್ತು. ನನ್ನಂತೆ ಅನೇಕ ಹುಡುಗರು ಶಾಲೆಗೆ ತಮ್ಮ ತಂದೆ-ತಾಯಿಯರ್ ಜೊತೆ ಸರದಿಯಲ್ಲಿ ಬಂದು ನಿಂತಿದ್ರು. ನನಗೇನೋ ಅದು ಕುಶಿ. ಇದು ಹೊಸ ಜಾತ್ರೆ ತರಹ ಕಂಡಿತ್ತು. ಕೆಲವರು ಅಳ್ತಾ ಇದ್ದರೆ ಇನ್ನು ಕೆಲವರು ಬೇಗ ಮನೆಗೆ ಹೋಗೋಣ ಅಂತ ಕಾಯ್ತಾ ಇದ್ರೂ. ಸರದಿಯಲ್ಲಿ ನಾನು ಬಾಬಾನ್ ಜೊತೆ ನಿಂತಿದ್ದೆ. ಸೇರ್ಪಡೆ ಒಂದು ತುಂಬಾ ಸರಳವಾದ ವಿಧಾನ ವಾಗಿತ್ತು. ಅಲ್ಲಿ ಕುಳಿತ್ತಿದ್ದ ಟೀಚರ್ (ಪಾಟಿಲ್ ಟೀಚರ್) ಕೇಳಿದ್ದು ಕೆಲವೇ ವಿವರ : ಹೆಸರು, ತಂದೆಯ ಹೆಸರು, ಹುಟ್ಟಿದ ದಿನಾಂಕ, ಜಾತಿ. ಮೊದಲ ಎರಡು ತುಂಬಾ ಸರಳವಾಗಿದ್ದು ನಾನೇ ಹೇಳಿದೆ - "ಹೆಸರು - ಮಹೇಶ್ ವಿಠಲ ಘಾಟಗೆ" ; "ತಂದೆಯ ಹೆಸರು - ವಿಠಲ್ ರಾವಸಾಹೇಬ್ ಘಾಟಗೆ" ; ಮತ್ತೆ.. ಹುಟ್ಟಿದ ದಿನಾಂಕ , ಜಾತಿ ...ತೋಚಲಿಲ್ಲ. ಆಮೇಲೆ ನಾನು ಮುಖ ಸಪ್ಪ ಮಾಡಿ ; ತಲೆ ಎತ್ತಿ ಬಾಬಾನ್ ನೋಡಿದೆ. ಅವರಿಗೆ ನನ್ನ ಕಷ್ಟ ಅರಿವಾಗಿ ನಗ್ತಾ, ನನ್ನ ಹುಟ್ಟಿದ ದಿನಾಂಕ - "೦೫ ಸೆಪ್ಟೆಂಬರ್ ೧೯೮೧" ; ಜಾತಿ - "ಹಿಂದೂ ಮರಾಠ" ಅಂತ ಹೇಳಿದ್ರು. ಅದೇ ಮೊದಲ ಬಾರಿ ನಾನು ನನ್ನ ಹುಟ್ಟಿದ ದಿನಾಂಕ ಮತ್ತು ಜಾತಿ ಅರಿತಿದ್ದು. ಅಷ್ಟ್ರಲ್ಲಿ, ಬಾಬಾ ನನ್ನನ್ನು ಶಾಲೆಯಲ್ಲಿ ಬಿಟ್ಟು "ಸಾಲಿ ಮುಗದ ಮ್ಯಾಲ ನೆಟ್ಟಾಗ ಮನೆಗೆ ಹೋಗು. ಹಿಂದಿನ ರಸ್ತಾದಾಗ ನಮ್ಮ ಮನಿ" ಅಂತ ಹೇಳಿ ನನ್ನ ಜೇಬಿನಲ್ಲಿ ನಾಲ್ಕಾಣೆ ಇಟ್ಟರು. ನಾನು ಆ ನಾಲ್ಕಾಣೆ ನನ್ನ ಎದೆಗೆ ಒತ್ತಿ ಹಿಡಿದು ಜಾಗರೂಕ್ ನಾಗಿ ಅಲ್ಲೇ ಕುಳಿತೆ. ಸುತ್ತ ಮುತ್ತ ಹೊಸ ಮುಖಗಳು ; ಕೆಲವರು ಮುಖ ಬಿಗಿಯಾಗಿ ಹಿಡಿದು ಕೂತಿದ್ದು ; ಇನ್ನು ಕೆಲವರು ಅಳ್ತಾ ಇದ್ರೂ, ನಾನು ಎಲ್ಲೆಡೆ ಕಣ್ಣ ಹರಡಿಸಿ ನೋಡ್ತಾ ಇದ್ದೆ. ಶಾಲೆ ಒಂದು ಹೆಂಚಿನ ಮನೆಯಾಗಿತ್ತು; ಕಳೆದ ದಿನವೇ ಸೇಗುನಿಯಿಂದ ಸಾರಿಸಿದ್ದು ಅಂತ ನನ್ನ ಮೂಗು ಆ ವಾಸನೆ ಇಂದ ಹೇಳಿತು.

ಇನ್ನು admissions ನಡೀತಾ ಇತ್ತು. ನಾನು ಸರದಿಯಲ್ಲಿ ಬರುವ ಪ್ರತಿ ಹುಡುಗರ ಹೆಸರು ಕೇಳ್ತಾ ಇದ್ದೆ.ನನಗೆ ಬಾರದ ಪ್ರಶ್ನೆಗಳ ಉತ್ತರ ಇವರು ಬಲ್ಲರಾ ಎಂದು ಆಗುಂತಕನಾಗಿ ನಾನು ಆಲಿಸುತ್ತ ಇದ್ದೆ. ಮೊದಲ ಬಾರಿ ನನ್ನ ಕಿವಿಗೆ ಬಿದ್ದ ಶಬ್ದ - "ಹಿಂದೂ ಮರಾಠ" ಒಂದು ಹೊಸ ಲೋಕ ಅನಿಸಿತ್ತು. ಅಸ್ಟರಲ್ಲಿ ಇನ್ನೊಬ್ಬ ಹುಡುಗ ಪಕ್ಕದಲ್ಲಿ ಬಂದು ಕುಳಿತ - ಅವನ ಹೆಸರು - "ಮಹೇಶ್" !! ಪೂರ್ಣ ಹೆಸರು "ಮಹೇಶ್ ಶಂಕರ್ ಹಂದಿಗುಂದ" . ಅವನು ನಮ್ಮ ಓಣಿಯಲ್ಲಿ ವಾಸ್ ವಾಗಿದ್ದರೂ ನಮ್ಮ ಭೇಟಿ ಇದೆ ಮೊದಲು. ಅವನು ಸ್ವಲ್ಪ ಧ್ರಢವಾಗಿ, ನೇರವಾಗಿ ಕುಳಿತು ಬೋರ್ಡ್ ನೋಡ್ತಾ ಇದ್ದ. ಹಣೆಯ ಮೇಲೆ ವಿಭೂತಿ ಇತ್ತು. ಅಷ್ಟ್ರಲ್ಲಿ ಅಲ್ಲಿ ಇದ್ದ ಕೆಲ ತಂದೆ-ತಾಯಿಯರಿಗೆ ಹೊರಗಡೆ ಹೋಗಲು ಹೇಳಿ ಟೀಚರ್ ನಮ್ಮ ಮೊದಲ ಕ್ಲಾಸ್ ಫ್ರಾರಂಭ ಮಾಡಿದ್ರು. ನಮ್ಮನೆಲ್ಲ ಸಂಭಾಳಿ ಸುವದರಲ್ಲಿ ಕ್ಲಾಸ್ ಸಮಯ ಮುಗಿದಿತ್ತು. ಬಟ್ಟೆ ತರಲು ಹೋಗುತ್ತಿದ್ದ ಅಂಗಡಿಯ ಹುಡುಗ ಚೋಟೆ - "ಅಸ್ಲಂ ಪಠಾಣ" ಕೂಡ ಪರಿಚಯ ಮುಖವಗಿತ್ತು. ಕಾಯಿ ಪಲ್ಯ ಅಂಗಡಿಯ "ಜ್ಯೋತಿಬಾ ಸಾಳುಂಕೆ" ಕೂಡ "ಹಿಂದೂ ಮರಾಠ" ಅಂತ ಬರೆಸಿದ್ದು ಜ್ಞಾಪಕ ಉಂಟು.

ಶಾಲೆ ಘಂಟೆ ಬಾರಿಸಿದ್ದೆ ತಡ ನಾನು ಓಡಿದ್ದು ಮನೆಗೆ. ಅವ್ವ ಕೇಳಿದ್ದು - "ಏನ್ ಮಾಡಿದಿ ಇವತ್ತ ಸಾಲ್ಯಾಗ ?" ನಾನು ಹೇಳಿದೆ - "ನನ್ನ ಹೆಸರು, ಬಾಬನ ಹೆಸರು ಬರಕೊಂದ್ರ; ಆಮೇಲೆ ಬೋರ್ಡ್ ಮ್ಯಾಲ ಅಕ್ಷರ ಮಾಲೆ ಅಂತ ಬರಿದ್ರೋಳಗ ಸಾಲಿ ಮುಗಿತು". ಆಮೇಲೆ ಶುರುವಾಗಿದ್ದು ನನ್ನ ಪ್ರಶ್ನೆ . "ಅವ್ವ - ನಾವು ಹಿಂದೂ ಮರಾಠ ಅಂತ ಬರಿಸಿದಿವಿ. ಹಂಗ ಅಂದ್ರ ಏನು ?" ಅಡುಗೆ ಮನೆಯಲ್ಲಿ - ತಾಯಿ ಜೊತೆ ನನ್ನ ಪಾಠ ಇದೆ ರೀತಿ ಪ್ರಾರಂಭ ಆಯಿತು. ಅವ್ವ ಹೇಳಿದ್ದು - "ಹಳಿ ಕಾಲದಾಗ ಛತ್ರಪತಿ ಶಿವಾಜಿ ಅಂತ ರಾಜ ಇದ್ರು. ಬಹಳ ಶಕ್ತಿ ಶಾಲಿ, ಪ್ರಭಾವ ಶಾಲಿ, ಬುದ್ದಿವಂತರು. ಅವರು ತಾಯಿ ಜೀಜಾ ಮಾತೆ. ಹಿಂದೂ ಸಮಾಜಗೊಸ್ಕರ್ ಹೋರಾಡಿದರು". ನನ್ನ ಕಿವಿಗೆ ಬಿದ್ದಿದು ರಾಜ ಮಾತ್ರ ; ಅವಾಗ ನಾನು ಅಲ್ಲೇ ಪಡುಸಾಲೆಯಲ್ಲಿ ಇದ್ದ "ಕುದುರೆ ಮೇಲೆ ಕುಳಿತಿರೋ ಶಿವಾಜಿ ಚಿತ್ರ" ನೋಡಿ ಹುಮ್ಮಸ್ಸಿನಿಂದ ನುಡಿದಿದ್ದು "ನಾನು ಕುದುರೆ ಮೇಲೆ ಕುಲಿತ್ಕೋ ಬೇಕು."

ಆದರೂ "ಹಿಂದೂ ಮರಾಠ" ಎಂಬ ಈ ಪದ ನಾನು ಶಾಲೆಯಲ್ಲಿ ಕೇಳಿದ "ಹಿಂದೂ ಲಿಂಗಾಯತ", "ಮುಸ್ಲಿಂ ಸುನ್ನಿ" ಗಿಂತ ಭಿನ್ನವಾಗಿ ಭಾಸವಾಗಿತ್ತು. ಮುಂಬರುವ ದಿನಗಳಲ್ಲಿ ಅದರ ವಿಭಿನ್ನತೆ ಅರಿವಾಗುವುದು ಎಂದು ನಾನು ತಿಳದಿರಲಿಲ್ಲ. ಆ ದಿನ ಆ ಕ್ಷಣದ ವರೆಗೂ ಈ ಮುಂಚೆ ಎಂದೂ ನನ್ನ ತಂದೆಯಾಗಲಿ ತಾಯಿಯಾಗಲಿ ಜಾತಿ-ಮತ ಭೇಧದ ಬಗ್ಗೆ ಪ್ರಸ್ತಾಪಿಸಿರಲಿಲ್ಲ ; ಜಾತಿಯ ಬೀಜ ಬಿತ್ತಿದ್ದು ಶಾಲೆಯಲ್ಲಿ ಅನ್ನೋದೂ ಎಂಥಾ ವಿಪರ್ಯಾಸ !!

Sunday, October 25, 2009

ನಿಜ ಜೀವನದಲ್ಲಿ ಹಾಸ್ಯ : ಕಂಪನಿಯ ಹೆಸರಿನ ಗೊಂದಲ

ಭರತ್ - ನಮ್ಮ ಆಫೀಸ್ ನಲ್ಲಿ ನಮ್ಮ ಟೀಂ ನ ಒಂದು ಬೆನ್ನೆಲಬು. ಅವರದು ಒಂದು ವಿಶೇಷ ವ್ಯಕ್ತಿತ್ವ ಅಂದ್ರು ಅಡ್ಡಿ ಇಲ್ಲ :)
ದೇವರಲ್ಲಿ ಆಪಾರ ನಂಬಿಕೆ, ಭಯ-ಭಕ್ತಿ ಮತ್ತು ವಿಶ್ವಾಸ್ ಉಳ್ಳವರು. ಯಾವುದೇ ಒಂದು ಒಳ್ಳೆಯ ಕಾರ್ರ್ಯ ಮಾಡಲು ಶುಭ ಗಳಿಗೆ ನೋಡುವುದು ಒಂದು ಅಭ್ಯಾಸ. ಚೀನಾ ದೇಶಕ್ಕೆ ಕೆಲಸದ ಮೇರೆ ಹೋಗಬೇಕಾದಾಗ ಅವರು ತಮ್ಮ ಗುರುಗಳ ಸಲಹೆ ತಗೊಂಡಿದ್ದು ಒಂದು ಸಣ್ಣ ಉದಾಹರಣೆ.

ಮೊನ್ನೆ ನಮ್ಮ ಕಂಪನಿ ಹೆಸರು ಬದಲಾದಾಗ, ಭರತ್ ತಮ್ಮ ಗುರುಜಿಗೆ ಹೇಳಬಯಸಿದ್ದು ಒಂದು ಸ್ವಾರಸ್ಯಕರ ಸಂಗತಿಯಾಗಿತ್ತು. Jataayu (ಜತಾಯು) ಇವಾಗ Comviva (ಕಾಮವಿವ) ಅಂತ ಬದಲಾಯಿತು. ಜತಾಯು ಒಂದು ಭಾರತಿಯ ಹೆಸರಾಗಿದ್ದು ರಾಮಾಯಣ ದಲ್ಲಿ ಶ್ರೀ ರಾಮನಿಗೆ ಸೀತೆಯ ಅಪರಹಣದ ವಾರ್ತೆ ತಲುಪಿಸಿದ ಪ್ರತಿರೂಪ. ಅದೇ ಕಾಮವಿವ Com - communication Viva - Life Communication is Life ಅಂತ ಬದಲಾದರೂ..ಕನ್ನಡದಲ್ಲಿ ಕಾಮವಿವ ಅಂತ ಉಳಿತು. ಭರತ್ ಇದನ್ನು ತಮ್ಮ ಗುರುಜಿಗೆ ಮೊಬೈಲ್ ನಲ್ಲಿ ಹೇಳಿದಾಗ..
ಭರತ್: "ಗುರುಜಿ, ನಮ್ಮ ಕಂಪನಿ ಹೆಸರು ಬದಲಾಯಿತು. Jataayu ಹೋಗಿ Comviva ಆಯಿತು"
ಗುರುಜಿ: "ಏನಯ್ಯಾ ಭರತ್, ಅದೆಂತ ಹೆಸರಿದು "ಕಾಮ ವಿವಾಹ !! ಛೆ ಛೆ " ಎಂದು
ಗುರುಜಿ ಹೌಹಾರಿದರು. ಇದನ್ನು ಅರಿತ ಭರತ್ ಮತ್ತೆ ಗಡಿಬಿಡಿಸಿ "ಇಲ್ಲಾ ಗುರುಜಿ, ಅದು Comviva ಹೊರತು ಕಾಮ ವಿವಾಹ ಅಲ್ಲ ಅಂತ ಒತ್ತಿ ಹೇಳಿದ ರೀತಿ" ನಮ್ಮನೆಲ್ಲಾ ನಗೆ ಪಾಲು ಮಾಡಿತ್ತು.

Sunday, August 30, 2009

ಅಂದಿನ ಚುಟುಕುಗಳ ಓಟ

ಅಕ್ಟೋಬರ್ ೧೯೯೮

ಪ್ರೀತಿಗೆ ಭಯ
!!
ಹೂವು ಮುಡಿಬೇಕಾದ್ರ , ಮುಳ್ಳಿನ ಭಯ
ಜೇನು ಸವಿಬೇಕಂದ್ರ,, ಜೇನು ಹುಳಗಳ ಭಯ
ನಿನ್ನ ಪ್ರೀತಿಸ್ಬೇಕಂದ್ರ , ನಿಮ್ಮಪ್ಪನ ಭಯ

ಜಾರಿ ಬಿದ್ದ
ಮಳೆಯ ಕಿಚಿ-ಪಿಚಿ ಕೆಸರಲಿ ಎಂದು ಬೀಳದ ಚೋರ
ಬಿದ್ದನು ವಿಶಾಲವಾದ ದಾರಿಯಲಿ - ಜೋರ
ಕಾಲ್ಜಾರಿಯಲ್ಲ ಗೆಳತಿ, ಇಗೋ ನೋಡಿ ನಿನ್ನ ಈ ಸೌಂದರ್ಯ್ಯವನ್ನು

ಮನೆ-ಮನೆ
ಮನೆ-ಮನೆಗೋ ರಾಜ-ಕಾರಣಿಗಳು ಹೋಗ್ತಾರ ವೋಟು ಕೇಳಾಕ್,
ಆದ್ರ ನಮ್ಮ ರಾಜ್-ನಿಗೋ ಹೋಗಬೇಕೈತು ಹೆಣ್ಣು ಕೇಳಾಕ್ ;

ಅಕ್ಕ-ತಂಗಿ
ನಿಂಬೆ ಗಿಂತ ಮೂಸಂಬಿಯೇ ಚೆನ್ನ,
ಗೆಳತಿ ನಿನ್ ಗಿಂತ ನಿನ್ನ ಅಕ್ಕಾನೆ ಚೆನ್ನ ;

-ಮಯುರ

Thursday, June 25, 2009

ನಾ ನಿನ್ನಲ್ಲಿ ಚಂದ್ರನ ಕಂಡೆ

ಓ ಗುಲಾಬಿ, ಇಗೋ ನಿನ್ನ ಭಾವನೆಗೆ ,
ಸಮರ್ಪಿಸುವೆ ನನ್ನ ಕವನ.
ನೀ ಆಗಸದಲಿ ಚಂದ್ರನ ಕಂಡಂತೆ,
ನಾ ನಿನ್ನಲ್ಲಿ ಚಂದ್ರನ ಕಂಡೆ.

ಜಗವೆಲ್ಲ ಕೋಪದಿ ಮುಳುಗಿರಲು,
ಓ ಚಂದಮಾಮ, ಕಂಡೆಯಾ ಪ್ರೀತಿನ ?
ಆದರೂ ನೀನು ದೂರದ ಶೀತ,
ಮರೆತಿಲ್ಲ ನಾ ನಿನ್ನ ಶ್ವೇತ ;

ನಿನ್ನ ಕಂಡು ಒಮ್ಮೆ ಮಾತು ಮೌನವಾದಿತು,
ಇನ್ನೊಮ್ಮೆ ಮೌನ ಮಾತೈತು;
ನೀ ನನ್ನ ಜೊತೆ ಏಂದು ನಾ ಹೇಳಲು ;
ಲೋಕವೇ ನಕ್ಕು ಅಂತು ಅಯ್ಯೋ ಮರಳು ;

ಓ ಚಂದ್ರ ಕಂಡಿರುವೆ ಪ್ರೀತಿ , ತಾಳ್ಮೆ ನಿನ್ನಲ್ಲಿ ,
ನಿನ್ನ ಛಾಯೆಯೇ ನನ್ನ ಬಾಳಲಿ ;

-ಮಯೂರ

Tuesday, June 9, 2009

ಮನದ ಅರಸಿ

ಓ ಅರಸಿ, ಮನದಲೇನೋ ತವಕಾ,
ಆಗುವೆ ನಾನು ಕೆಲವೊಮ್ಮೆ ಭಾವುಕ ;
ಯಾರಿಗೆ ಹೇಳಲಿ, ಏನಂತ ಹೇಳಲಿ,
ಬದುಕನು ಬಳಸಿ - ಉಳಿಸಿ ಇತಿಹಾಸದ ಪುಟದಲಿ ;

ಒಮ್ಮೆ ಮುಗುಳ್ನಕ್ಕು , ಇನ್ನೊಮ್ಮೆ ಒಬ್ಬಂಟಿ ಅತ್ತು ,
ಒಮ್ಮೆ ಬಾನಲ್ಲಿ ಹಾರಾಡಿ , ಇನ್ನೊಮ್ಮೆ ಭುವಿಯಲ್ಲಿ ಬಚ್ಚಿಟ್ಟು ;
ಜೀವನದ ಪಯಣ ಸುಂದರ್ ವೆಂದಾಗ ,
ದುಃಖದ ಹೊಳೆ ಇಗೋ ನೋಡು ನನ್ನ , ಏಂದು ಮೂಗು ಮುರಿದಾಗ ;

ಹೊತ್ತು ಹೊರಟಿದ್ದೆ ...ಹಳೆಯ ನೆನಪುಗಳ ಸಂತೆ,
ಅರಿತರೂ ಅದಲ್ಲ ನನ್ನ ಜೀವನದ ಮೂಟೆ ಕಂತೆ ;
ಗೆಲ್ಲುವ ಛಲದಲ್ಲಿ ಮರಿತೆ ಆಡುವ ಆಟ ,
ಓ ಅರಸಿ - ಕಲಿಸುತಿರುವೆ ನೀ ದಿನಕ್ಕೊಂದು ಪಾಠ ,

ಅರಿತೆ ನಾನು ನನ್ನ ಮನವಾ ಅಂದುಕೊಂಡೆ,
ಮನದ ಅಡಿಯಲಿ ನನ್ನೇ ಕಳೆದುಕೊಂಡೆ,
ಓ ಅರಸಿ - ಅರಸುತ ನಿನ್ನ, ಲೋಕವೆಲ್ಲಾ ,
ಕೊನೆಗೂ ಕಂಡು ಕೊಂಡೆ ಪ್ರತಿ ಕ್ಷಣದಲ್ಲಿ -ಈ ಬದುಕೆಲ್ಲ ;

--ಮಯೂರ