Posts

Showing posts from June, 2009

ನಾ ನಿನ್ನಲ್ಲಿ ಚಂದ್ರನ ಕಂಡೆ

ಓ ಗುಲಾಬಿ, ಇಗೋ ನಿನ್ನ ಭಾವನೆಗೆ , ಸಮರ್ಪಿಸುವೆ ನನ್ನ ಕವನ. ನೀ ಆಗಸದಲಿ ಚಂದ್ರನ ಕಂಡಂತೆ, ನಾ ನಿನ್ನಲ್ಲಿ ಚಂದ್ರನ ಕಂಡೆ. ಜಗವೆಲ್ಲ ಕೋಪದಿ ಮುಳುಗಿರಲು, ಓ ಚಂದಮಾಮ, ಕಂಡೆಯಾ ಪ್ರೀತಿನ ? ಆದರೂ ನೀನು ದೂರದ ಶೀತ , ಮರೆತಿಲ್ಲ ನಾ ನಿನ್ನ ಶ್ವೇತ ; ನಿನ್ನ ಕಂಡು ಒಮ್ಮೆ ಮಾತು ಮೌನವಾದಿತು , ಇನ್ನೊಮ್ಮೆ ಮೌನ ಮಾತೈತು ; ನೀ ನನ್ನ ಜೊತೆ ಏಂದು ನಾ ಹೇಳಲು ; ಲೋಕವೇ ನಕ್ಕು ಅಂತು ಅಯ್ಯೋ ಮರಳು ; ಓ ಚಂದ್ರ ಕಂಡಿರುವೆ ಪ್ರೀತಿ , ತಾಳ್ಮೆ ನಿನ್ನಲ್ಲಿ , ನಿನ್ನ ಛಾಯೆಯೇ ನನ್ನ ಬಾಳಲಿ ; -ಮಯೂರ

ಮನದ ಅರಸಿ

ಓ ಅರಸಿ, ಮನದಲೇನೋ ತವಕಾ, ಆಗುವೆ ನಾನು ಕೆಲವೊಮ್ಮೆ ಭಾವುಕ ; ಯಾರಿಗೆ ಹೇಳಲಿ, ಏನಂತ ಹೇಳಲಿ, ಬದುಕನು ಬಳಸಿ - ಉಳಿಸಿ ಇತಿಹಾಸದ ಪುಟದಲಿ ; ಒಮ್ಮೆ ಮುಗುಳ್ನಕ್ಕು , ಇನ್ನೊಮ್ಮೆ ಒಬ್ಬಂಟಿ ಅತ್ತು , ಒಮ್ಮೆ ಬಾನಲ್ಲಿ ಹಾರಾಡಿ , ಇನ್ನೊಮ್ಮೆ ಭುವಿಯಲ್ಲಿ ಬಚ್ಚಿಟ್ಟು ; ಜೀವನದ ಪಯಣ ಸುಂದರ್ ವೆಂದಾಗ , ದುಃಖದ ಹೊಳೆ ಇಗೋ ನೋಡು ನನ್ನ , ಏಂದು ಮೂಗು ಮುರಿದಾಗ ; ಹೊತ್ತು ಹೊರಟಿದ್ದೆ ...ಹಳೆಯ ನೆನಪುಗಳ ಸಂತೆ, ಅರಿತರೂ ಅದಲ್ಲ ನನ್ನ ಜೀವನದ ಮೂಟೆ ಕಂತೆ ; ಗೆಲ್ಲುವ ಛಲದಲ್ಲಿ ಮರಿತೆ ಆಡುವ ಆಟ , ಓ ಅರಸಿ - ಕಲಿಸುತಿರುವೆ ನೀ ದಿನಕ್ಕೊಂದು ಪಾಠ , ಅರಿತೆ ನಾನು ನನ್ನ ಮನವಾ ಅಂದುಕೊಂಡೆ, ಮನದ ಅಡಿಯಲಿ ನನ್ನೇ ಕಳೆದುಕೊಂಡೆ, ಓ ಅರಸಿ - ಅರಸುತ ನಿನ್ನ, ಲೋಕವೆಲ್ಲಾ , ಕೊನೆಗೂ ಕಂಡು ಕೊಂಡೆ ಪ್ರತಿ ಕ್ಷಣದಲ್ಲಿ -ಈ ಬದುಕೆಲ್ಲ ; --ಮಯೂರ