ನಿಜ ಜೀವನದಲ್ಲಿ ಹಾಸ್ಯ : ಕಂಪನಿಯ ಹೆಸರಿನ ಗೊಂದಲ
ಭರತ್ - ನಮ್ಮ ಆಫೀಸ್ ನಲ್ಲಿ ನಮ್ಮ ಟೀಂ ನ ಒಂದು ಬೆನ್ನೆಲಬು. ಅವರದು ಒಂದು ವಿಶೇಷ ವ್ಯಕ್ತಿತ್ವ ಅಂದ್ರು ಅಡ್ಡಿ ಇಲ್ಲ :) ದೇವರಲ್ಲಿ ಆಪಾರ ನಂಬಿಕೆ, ಭಯ-ಭಕ್ತಿ ಮತ್ತು ವಿಶ್ವಾಸ್ ಉಳ್ಳವರು. ಯಾವುದೇ ಒಂದು ಒಳ್ಳೆಯ ಕಾರ್ರ್ಯ ಮಾಡಲು ಶುಭ ಗಳಿಗೆ ನೋಡುವುದು ಒಂದು ಅಭ್ಯಾಸ. ಚೀನಾ ದೇಶಕ್ಕೆ ಕೆಲಸದ ಮೇರೆ ಹೋಗಬೇಕಾದಾಗ ಅವರು ತಮ್ಮ ಗುರುಗಳ ಸಲಹೆ ತಗೊಂಡಿದ್ದು ಒಂದು ಸಣ್ಣ ಉದಾಹರಣೆ. ಮೊನ್ನೆ ನಮ್ಮ ಕಂಪನಿ ಹೆಸರು ಬದಲಾದಾಗ, ಭರತ್ ತಮ್ಮ ಗುರುಜಿಗೆ ಹೇಳಬಯಸಿದ್ದು ಒಂದು ಸ್ವಾರಸ್ಯಕರ ಸಂಗತಿಯಾಗಿತ್ತು. Jataayu (ಜತಾಯು) ಇವಾಗ Comviva (ಕಾಮವಿವ) ಅಂತ ಬದಲಾಯಿತು. ಜತಾಯು ಒಂದು ಭಾರತಿಯ ಹೆಸರಾಗಿದ್ದು ರಾಮಾಯಣ ದಲ್ಲಿ ಶ್ರೀ ರಾಮನಿಗೆ ಸೀತೆಯ ಅಪರಹಣದ ವಾರ್ತೆ ತಲುಪಿಸಿದ ಪ್ರತಿರೂಪ. ಅದೇ ಕಾಮವಿವ Com - communication Viva - Life Communication is Life ಅಂತ ಬದಲಾದರೂ..ಕನ್ನಡದಲ್ಲಿ ಕಾಮವಿವ ಅಂತ ಉಳಿತು. ಭರತ್ ಇದನ್ನು ಗುರುಜಿಗೆ ಮೊಬೈಲ್ ನಲ್ಲಿ ಹೇಳಿದಾಗ.. ಭರತ್: "ಗುರುಜಿ, ನಮ್ಮ ಕಂಪನಿ ಹೆಸರು ಬದಲಾಯಿತು. Jataayu ಹೋಗಿ Comviva ಆಯಿತು" ಗುರುಜಿ: "ಏನಯ್ಯಾ ಭರತ್, ಅದೆಂತ ಹೆಸರಿದು "ಕಾಮ ವಿವಾಹ !! ಛೆ ಛೆ " endu ಗುರುಜಿ ಹೌಹಾರಿದರು. ಇದನ್ನು ಅರಿತ ಭರತ್ ಮತ್ತೆ ಗಡಿಬಿಡಿಸಿ "ಇಲ್ಲಾ ಗುರುಜಿ, ಅದು Comviva - ಹೊರತು ಕಾಮ ವಿವಾಹ ಅಲ್ಲ ಅಂತ ಒತ್ತ...